/ಕೆಎಸ್ಐಐಡಿಸಿ ಬಗ್ಗೆ

ಕೆಎಸ್ಐಐಡಿಸಿ ಬಗ್ಗೆ

ಕೆಎಸ್ಐಐಡಿಸಿ ಬಗ್ಗೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಈ ಹಿಂದೆ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮವೆಂದು ಕರೆಯಲ್ಪಡುತ್ತಿತ್ತು. ಇದು ಕರ್ನಾಟಕ ಸರ್ಕಾರದ ಸಂಪುರ್ಣ ಸ್ವಾಮ್ಯದ ಸಂಸ್ಥೆಯಾಗಿ ೧೯೬೪ರಲ್ಲಿ ಸ್ಥಾಪಿಸಲ್ಪಟ್ಟಿದ್ದು, ರಾಜ್ಯದಲ್ಲಿ, ವಿಶೇಷವಾಗಿ ಭಾರೀ ಮತ್ತು ಮಧ್ಯಮ ವಲಯದ ಕೈಗಾರಿಕೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತದೆ. ವಿವಿಧ ವಲಯದಲ್ಲಿ ಏರಿಕೆಯನ್ನು ತರುವಲ್ಲಿ ರಾಜ್ಯ ಸರ್ಕಾರದ ಪ್ರಮುಖ ಶಕ್ತಿಯಾಗಿ ಕೆಎಸ್ಐಐಡಿಸಿಯು, ರಾಜ್ಯದಾದ್ಯಂತ ೩೯೪ ಕಂಪೆನಿಗಳಿಗೆ ರೂ.೩೫೧ ಕೋಟಿಯ ಈಕ್ವಿಟಿಯಲ್ಲಿ ಭಾಗವಹಿಸುವಿಕೆಯೊಂದಿಗೆ ನೆರವಾಗಿರುತ್ತದೆ. ಅಲ್ಲದೇ ಕೆಎಸ್ಐಐಡಿಸಿಯು, ಸಾಲದ ರೂಪದಲ್ಲಿ ಇಂಜಿನಿಯರಿಂಗ್, ರಾಸಾಯನಿಕಗಳು, ಕಟ್ಟಡ ನಿರ್ಮಾಣ ನೀತಿಗಳು, ಅತಿಥಿ ಸತ್ಕಾರ, ರಿಯಲ್ ಎಸ್ಟೇಟ್, ಕೃಷಿ ಮತ್ತಿತರ ಪ್ರಮುಖ ವಲಯದಲ್ಲಿ ಸುಮಾರು ರೂ.೨,೨೨೩ ಕೋಟಿಯನ್ನು ಸಾಲದ ರೂಪದಲ್ಲಿ ನೀಡುವ ಮೂಲಕ ಹಣಕಾಸಿನ ನೆರವನ್ನೂ ನೀಡಿರುತ್ತದೆ. ಕೆಎಸ್ಐಐಡಿಸಿಯು ಸದ್ಯಕ್ಕೆ ಬಾಕಿ ಇರುವ ಸಾಲಗಳ ವಸೂಲಾತಿಯಲ್ಲಿ ತೊಡಗಿಸಿಕೊಂಡಿರುವುದೂ ಅಲ್ಲದೇ ಪಿಪಿಪಿ ಆಧಾರದ ಮೇಲೆ ಅಂತರ ರಾಷ್ಟ್ರೀಯ ಸಮ್ಮೇಳನಾ ಕೇಂದ್ರ, ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಬೆಂಗಳೂರು ಸಿಗ್ನೇಚರ್ ಬಸ್ನೆಸ್ ಪಾರ್ಕ್ ಮತ್ತು ತದಡಿಯಲ್ಲಿ ಸಮುದ್ರ ಬಂದರಿನಂತಹ ಪ್ರಮುಖ ಮೂಲಸೌಲಭ್ಯ ಯೋಜನೆಗಳ ಅಭಿವೃದ್ಧಿಯನ್ನೂ ಕೈಗೆತ್ತಿಕೊಂಡಿರುತ್ತದೆ. ಇದಲ್ಲದೇ, ಕೆಎಸ್ಐಐಡಿಸಿಯು ಸಮಾಲೋಚನೆ ಮತ್ತು ಸಲಹೆ ನೀಡುವ ಸಲುವಾಗಿ ಐಎಲ್ಎಫ್ಎಸ್ನೊಂದಿಗೆ ಜಂಟೀ ಉದ್ಯಮ ಒಪ್ಪಂದವನ್ನೂ ಮಾಡಿಕೊಂಡಿರುತ್ತದೆ.