//ಪ್ರಮುಖ ಅಧಿಕಾರಿಗಳು

ಪ್ರಮುಖ ಅಧಿಕಾರಿಗಳು

ಗಂಗಾ ರಾಮ್ ಬದೇರಿಯಾ

ಶ್ರೀ ಗಂಗಾ ರಾಮ್ ಬದೇರಿಯಾ, ಭಾ.ಆ.ಸೇ

ಇಅಂಚೆ : md@ksiidc.com

ಮಾಧವ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ನಿಂದ ಸಿವಿಲ್ ಎಂಜಿನಿಯರಿಂಗ್ ಪದವೀಧರರು [MITS], ಜಿವಾಜಿ ವಿಶ್ವವಿದ್ಯಾಲಯ, ಗ್ವಾಲಿಯರ್. ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂ.ಟೆಕ್ ಅವರು 1989 ರಲ್ಲಿ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (ಐಎಎಸ್) ಗೆ ಸೇರಿಕೊಂಡರು. ಅವರು ರಾಜ್ಯ ಸರ್ಕಾರ ಮತ್ತು ವಿವಿಧ ಸಾಂಸ್ಥಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಶ್ರೀಮಂತ ಅನುಭವವನ್ನು ಹೊಂದಿದ್ದಾರೆ.

ಅವರು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ [KSIIDC] ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ಷಿಪ್ [ಪಿಪಿಪಿ] ಆಧಾರದ ಮೇಲೆ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕೆ ಮುಂಚೂಣಿಯಲ್ಲಿದೆ.

ಶ್ರೀ ಎನ್. ಆರ್. ಎನ್. ಸಿಂಹ, ಕಾರ್ಯನಿರ್ವಾಹಕ ನಿರ್ದೇಶಕರು (ಪ್ರಭಾರ)

ಶ್ರೀ ಎನ್. ಆರ್. ಎನ್. ಸಿಂಹ, ಕಾರ್ಯನಿರ್ವಾಹಕ ನಿರ್ದೇಶಕರು (ಪ್ರಭಾರ)

ಇಅಂಚೆ : ed@ksiidc.com

ಸಿವಿಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವೀಧರರು. ಇವರು ಯು.ವಿ.ಸಿ.ಇ.ಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ ಮತ್ತು ನಂತರದಲ್ಲಿ ಕರ್ನಾಟಕ ಅರ್ಬನ್ ಇನ್ಫ್ರಾಸ್ರ್ಟಕ್ಚರ್ ಡೆವಲಪ್ ಮೆಂಟ್ ಮತ್ತು ಫೈನಾನ್ಸ್ ಕಾರ್ಪೋರೇಶನ್ (ಕೆ.ಯು.ಐ.ಡಿ.ಎಫ್.ಸಿ.) ನಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಶ್ರೀ ಎನ್.ಕೆ. ಪರಶುರಾಮ್, ಉಪ ಪ್ರಧಾನ ವ್ಯವಸ್ಥಾಪಕರು

ಶ್ರೀ ಎನ್.ಕೆ. ಪರಶುರಾಮ್, ಉಪ ಪ್ರಧಾನ ವ್ಯವಸ್ಥಾಪಕರು

ಇಅಂಚೆ : parashuram@ksiidc.com

ಮೈಸೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಕೇಂದ್ರ ಸರಕಾರದ
ಯೋಜನೆಯೊಂದರಲ್ಲಿ (ಐಸಿಎಅರ್-ಕೆವಿಕೆ) ಸೇವೆ ಪ್ರಾರಂಭ. ೧೯೯೨ರಲ್ಲಿ ಕೆಎಸ್ಐಐಡಿಸಿಗೆ ಸೇರ್ಪಡೆ ಮತ್ತು ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಣೆ. ಸದ್ಯದಲ್ಲಿ ಹಣಕಾಸು ಮತ್ತು ಲೆಕ್ಕಪತ್ರ, ಎಫ್ಎಸ್ಡಿ ಹಾಗೂ ವಸೂಲಾತಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ವೈ. ಶ್ರೀನಿವಾಸಪ್ಪ, ಉಪ ಪ್ರಧಾನ ವ್ಯವಸ್ಥಾಪಕರು

ಶ್ರೀ ವೈ. ಶ್ರೀನಿವಾಸಪ್ಪ, ಉಪ ಪ್ರಧಾನ ವ್ಯವಸ್ಥಾಪಕರು

ಇಅಂಚೆ : gailcell.ksiidc@gmail.com

ಬೆಂಗಳೂರುವಿಶ್ವವಿದ್ಯಾಲಯದಿಂದ ಬಿಸಿನೆಸ್ ಮ್ಯಾನೇಜ್ ಮೆಂಟಿನಲ್ಲಿ ಸ್ನಾತಕೋತ್ತರ ಪದವಿ. ಕೆಎಸ್ಐಐಡಿಸಿಗೆ ಸೇರುವ ಮೊದಲು ಎನ್.ಎಸ್.ಐ.ಸಿ.ಯಲ್ಲಿ ಲೆಕ್ಕಪತ್ರ ಅಧಿಕಾರಿಯಾಗಿ ೫ ವರ್ಷಗಳ ಸೇವೆ ಸಲ್ಲಿಕೆ. ಕೆಎಸ್ಐಐಡಿಸಿ ಯಲ್ಲಿ ವಿವಿಧ ಸ್ಥಾನಗಳಲ್ಲಿ ಮತ್ತು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. ಸದ್ಯ ಐಪಿಡಿಯ ಮುಖ್ಯಸ್ಥರಾಗಿರುತ್ತಾರೆ.

ಶ್ರೀಮತಿ. ಎಸ್. ಆರ್. ಶಕುಂತಲಮ್ಮ, ಸಾರ್ವಜನಿಕ ಮಾಹಿತಿ ಅಧಿಕಾರಿ (ಆರ್ ಟಿಐ)

ಶ್ರೀಮತಿ. ಎಸ್. ಆರ್. ಶಕುಂತಲಮ್ಮ, ಸಾರ್ವಜನಿಕ ಮಾಹಿತಿ ಅಧಿಕಾರಿ (ಆರ್ ಟಿಐ)

ಇಅಂಚೆ : ksiidcz3@ksiidc.com

ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರೆ. ೧೯೮೫ರಲ್ಲಿ ಕೆ.ಎಸ್.ಐ.ಐ.ಡಿ.ಸಿಗೆ ಸೇರ್ಪಡೆ ಮತ್ತು ಅಪ್ರೈಸಲ್/ ವಸೂಲಾತಿ ವಿಭಾಗದಲ್ಲಿ ಸೇವೆ ಸಲ್ಲಿಸಿರುತ್ತಾರೆ. ಸದ್ಯ ವಸೂಲಾತಿ ವಿಭಾಗದಲ್ಲಿ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ – ಆರ್ ಟಿಐ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.