//ಮೈಲಿಗಲ್ಲುಗಳು

ಮೈಲಿಗಲ್ಲುಗಳು

೨೦೧೪

ಸದ್ಯದ ಯೋಜನೆಗಳು : ಕೆಎಸ್ಐಐಡಿಸಿಯು ರಾಜ್ಯದ ಈ ಕೆಳಕಂಡ ಮೂಲಸೌಲಭ್ಯ ಯೋಜನೆಗಳ ನೋಡಲ್ ಏಜೆನ್ಸಿಯಾಗಿರುತ್ತದೆ:

೧. ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್

೨. ಬೆಂಗಳೂರು ಅಂತರರಾಷ್ಟ್ರೀಯ ಸಮ್ಮೇಳನಾ ಕೇಂದ್ರ

೩. ತದಡಿ ಸಮುದ್ರ ಬಂದರು

೪. ನಗರ ಅನಿಲ ಹಂಚಿಕೆ

೫. ಏರ್ ಸ್ಟ್ರಿಪ್ ಗಳು ಮತ್ತು ಹೆಲಿಪ್ಯಾಡ್ ಗಳ ಅಭಿವೃದ್ಧಿ

೨೦೧೩

ಕರ್ನಾಟಕದಲ್ಲಿ ಗ್ಯಾಸ್ ಅಥಾರಿಟಿ ಆಫ್ ಇಂಡಿಯ (ಜಿಎಐಎಲ್) ಇವರ ದಭೋಲ್- ಬೆಂಗಳೂರು ನಡುವೆ ಅನಿಲ ಪೈಪ್ ಲೈನ್ ಯೋಜನೆಯ ಜಾರಿಯನ್ನು ಕೆಎಸ್ಐಐಡಿಸಿಯು ಸಂಘಟಿಸಿ ಅನುಕೂಲ ಮಾಡಿಕೊಟ್ಟಿರುತ್ತದೆ.

೨೦೦೮-೦೯

ದೇವನಹಳ್ಳಿಯಲ್ಲಿ ಹೊಸ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯ ಸ್ಥಾಪನೆ.

೨೦೦೭-೦೮

ರಾಜಾಜಿನಗರದ ಐಟಿ/ಬಿಟಿ ಪಾರ್ಕಿನ ಎರಡನೆಯ ಆಧುನಿಕ ಕಛೇರಿ ಸಂಕೀರ್ಣ ಕಟ್ಟಡದ ಅಭಿವೃದ್ಧಿ.

೨೦೦೬-೦೭

೨೦೦೬ರ ನವೆಂಬರ್ ತಿಂಗಳಿನಲ್ಲಿ ‘ಸುವರ್ಣ ಕರ್ನಾಟಕ ಕಾಯಕ ಉದ್ಯೋಗ ಶಿಕ್ಷಣ ಯೋಜನೆ’ಯು ಪ್ರಾರಂಭಿಸಲ್ವಟ್ಟು ಸುವರ್ಣ ಕರ್ನಾಟಕ ಆಚರಣೆಯನ್ನು ಸಂಘಟಿಸಿರುತ್ತದೆ.

ಯೋಜನಾ ಉನ್ನತೀಕರಣ ಮತ್ತು ಮೂಲಸೌಲಭ್ಯ ಯೋಜನೆ ಅಭಿವೃದ್ಧಿಯನ್ನು ಗುರುತಿಸಿ ಮುನ್ನಡೆಸಿಕೊಂಡು ಹೋಗುವ ದೃಷ್ವಿಯಿಂದ ಕೆಎಸ್ಐಐಡಿಸಿ-ಐಎಲ್&ಎಫ್ಎಸ್ ಪ್ರಾಜೆಕ್ಟ್ ಡೆವೆಲಪ್ ಮೆಂಟ್ ಕಂಪೆನಿ ಲಿಮಿಟೆಡ್ (ಕೆಐಪಿಡಿಸಿ) ನ್ನು ೨೦೦೭ರ ಜನವರಿಯಲ್ಲಿ ಸ್ಥಾಪಿಸಲಾಯಿತು

೨೦೦೩-೦೪

ರಾಜ್ಯದಲ್ಲಿ ಫುಡ್ ಪಾರ್ಕ್ ಗಳಿಗೆ ಬೆಂಬಲ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಫುಡ್ ಕರ್ನಾಟಕ ಲಿಮಿಟೆಡ್ (ಎಫ್ ಕೆಎಲ್) ನ ಸ್ಥಾಪನೆಯ ಜವಾಬ್ದಾರಿಯನ್ನು ಸರ್ಕಾರವು ಕೆಎಸ್ಐಐಡಿಸಿಗೆ ವಹಿಸಿತು.

೨೦೦೦-೦೨

೨೦೦೦ದ ಜೂನ್ ತಿಂಗಳಿನಲ್ಲಿ ಪ್ರಥಮ ವಿಶ್ವ ಹೂಡಿಕೆದಾರರ ಸಮ್ಮೇಳನ(ಜಿಐಎಂ) ಮತ್ತು ಜೂನ್ ೨೦೦೨ರಲ್ಲಿ ಪಾಲುದಾರಿಕೆ ಸಮ್ಮಿತ್ ಗಳ ಆಯೋಜನೆ.

೧೯೯೯-೨೦೦೦

ಆಧುನಿಕ ಸೌಕರ್ಯಗನ್ನೊಳಗೊಂಡ ಅತ್ಯಂತ ಹೊಸ ವಿನ್ಯಾಸದ ಸುಮಾರು ೩೬,೦೦೦ ಚ. ಮೀಟರ್ ವಿಸ್ತೀರ್ಣದ ಖನಿಜ ಭವನ ಕಛೇರಿ ಸಂಕೀರ್ಣವನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಸ್ಥಾಪನೆ.

೧೯೯೮-೯೯

ಕೆ ಎಸ್ ಎಫ್ ಸಿ ಮತ್ತು ಎಸ್ ಐ ಡಿ ಬಿ ಐ ಸಹಯೋಗದಲ್ಲಿ ವೆಂಚರ್ ಕ್ಯಾಪಿಟಲ್ ಫಂಡಿನ ಅಂದರೆ, ಕರ್ನಾಟಕದ ಐಟಿ ಕೈಗಾರಿಕೆಗಳಿಗಾಗಿ ಕಿಟ್ ವೆನ್ ಫಂಡ್ ನ ಅಭಿವೃದ್ಧಿ.

೧೯೯೭-೯೮

ಇಂಡಿಯನ್ ಇನ್ ಸ್ವಿಟ್ಯೂಟ್ ಆಫ್ ಇನ್ ಫಾರ್ ಮೇಶನ್ ಟೆಕ್ನಾಲಜಿ, ಬೆಂಗಳೂರು (ಐಐಐಟಿ-ಬಿ) ಸ್ಥಾಪನೆ.

೧೯೯೫-೯೬

೧೯೯೬ರ ಕೈಗಾರಿಕಾ ನೀತಿಯಂತೆ ರಾಯಚೂರು ಗ್ರೋತ್ ಸೆಂಟರನ್ನು ಜಾರಿಗೆ ತರಲು ಪ್ರಸ್ತಾವನೆ.

ಸ್ಥಳೀಯ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಉತ್ತೇಜನ ನೀಡಲು ಮೈಸೂರು , ತುಮಕೂರು, ಹೊಸಪೇಟೆ , ದಾವಣಗೆರೆ ಮತ್ತು ರಾಯಚೂರಿನಲ್ಲಿ ಕೈಗಾರಿಕೋದ್ಯಮಿಗಳ ಸಮ್ಮೇಳನದ ಆಯೋಜನೆ.

೧೯೯೪-೯೫

ಬೆಳಗಾವಿ, ಹುಬ್ಬಳ್ಳಿ, ಮಂಗಳೂರು ಮತ್ತು ಮೈಸೂರಿನಲ್ಲಿ ವ್ಯವಹಾರ ಕ್ರೋಢೀಕರಣ ಆಂದೋಳನ ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಸಭೆಗಳ ಆಯೋಜನೆ.

ರೈಲ್ವೆ ಬಿಡಿ ಭಾಗಗಳನ್ನು ತಯಾರಿಸುವ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶದಿಂದ ಹಾಗೂ ಗುಲ್ಬರ್ಗ ವಲಯ ಕೈಗಾರಿಕೆಗಳ ಅಭಿವೃದ್ದಿಯ ದೃಷ್ಷಿಯಿಂದ ೧೯೯೪ರ ಜುಲೈನಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ, ಟ್ರೇಡ್ ಫೇರ್ ಮತ್ತು ವಿಚಾರ ಸಂಕೀರ್ಣಗಳನ್ನು ಆಯೋಜಿಸಲು ಸಕ್ರಿಯವಾಗಿ ಸಹಯೋಗ ನೀಡಿರುವುದು.

೧೯೯೧-೯೨

ಯುನಿಡೋ ದ ಕಾರ್ಯಕ್ರಮದ ಅಡಿಯಲ್ಲಿ ಫೆಡರೇಶನ್ ಆಫ್ ಡ್ಯಾನಿಶ್ ಇಂಡಸ್ರ್ಟೀಸ್/ ಡಿಎಎನ್ ಐಡಿಎ ದ ಮೂಲಕ ಕರ್ನಾಟಕದಲ್ಲಿರುವ ಆಹಾರ ಸಂಸ್ಕರಣಾ ಘಟಕಗಳ ಪುನರ್ವಸತಿ/ ಉನ್ನತೀಕರಕ್ಕಾಗಿ ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಣೆ.

ಐಟಿಐ, ಕೆ ಎಸ್ ಎಫ್ ಸಿ ಮತ್ತು ಏಶಿಯನ್ & ಪೇಸಿಫಿಕ್ ಸೆಂಟರ್ ಫಾರ್ ಟ್ರಾನ್ಸ್ಫರ್ ಆಫ್ ಟೆಕ್ನಾಲಜಿಯ (ಎಪಿಸಿಟಿಟಿ) ಸಹಯೋಗದಲ್ಲಿ ಪ್ರಥಮ ತಂತ್ರಜ್ಞಾನ ಉತ್ಸವ ಮತ್ತು ಎಲೆಕ್ಟ್ರಾನಿಕ್ಸ್, ಸಂವಹನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಚಾರಗಳಲ್ಲಿ ಹೈಟೆಕ್ ಸೆಮಿನಾರುಗಳ ಆಯೋಜನೆಯಲ್ಲಿ ಸಹಕಾರ ನಿಡಿರುವುದು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಐಎಸ್ ಆರ್ ಒ) ಮತ್ತು ಸೆಂಟ್ರಲ್ ಪವರ್ ರೀಸರ್ಚ್ ಇನ್ ಸ್ಟಿಟ್ಯೂಟ್ ಇವರುಗಳು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಮೇಲೆ ಸೆಮಿನಾರುಗಳು/ವರ್ಕ್ ಶಾಪ್ ಗಳ ಆಯೋಜನೆ ದೆಹಲಿಯಲ್ಲಿ ಕೈಗಾರಿಕೆಗಳ ಸಮಾಗಮ – ಸುಮಾರು ೪೦ ಪ್ರಮುಖ ಕೈಗಾರಿಕೋದ್ಯಮಿಗಳು ಭಾಗವಹಿಸಿರುವಿಕೆ.

ನವೆಂಬರ್ ೧೯೯೧ ರಲ್ಲಿ ಮಂಗಳೂರಿನಲ್ಲಿ ಕೈಗಾರಿಕೋದ್ಯಮಿಗಳ ಸಮ್ಮೇಳನ ಮತ್ತು ಕೈಗಾರಿಕಾ ಪ್ರೇರೇಪಣಾ ಆಂದೋಳನದ ಆಯೋಜನೆ.

೧೯೯೦-೯೧

ಪ್ರೋತ್ಸಾಹದ ಅಭಿವೃದ್ಧಿ ಸಾಲಗಳು ಮತ್ತು ರಾಜ್ಯದ ಸಹಾಯಧನ ವಿತರಣೆಯಲ್ಲಿ ನೋಡಲ್ ಏಜ್ಸೆನಿಯಾಗಿ ಕಾರ್ಯನಿರ್ವಹಣೆ.

೧೯೯೦ರ ಅಕ್ಟೋಬರ್ ತಿಂಗಳಿನಲ್ಲಿ ಎರಡು ಉನ್ನತ ಮಟ್ಟದ ಸಮಿತಿಗಳು ರಚಸಲ್ವಟ್ಟಿರುತ್ತದೆ: ಮೊದಲನೆಯದು, ರೂ.೧೦ ಕೋಟಿಯಿಂದ ರೂ.೫೦ ಕೋಟಿಯ ವರೆಗಿನ ಹೂಡಿಕೆಯ ಯೋಜನೆಯ ಎಸ್ ಡಬ್ಲ್ಯುಎ ಪ್ರಕರಣಗಳನ್ನು ಇತ್ಯರ್ಥ ಮಾಡಲು ಮಾನ್ಯ ಕೈಗಾರಿಕಾ ಸಚಿವರ ಅಧ್ಯಕ್ಷತೆಯ ಸಮಿತಿ ಮತ್ತೋಂದು, ರೂ.೫೦ ಕೋಟಿಗಿಂತ ಹೆಚ್ಚಿನ ಹೂಡಿಕೆಯ ಯೋಜನೆಗಳನ್ನು ಇತ್ಯರ್ಥ ಮಾಡಲು ಸನ್ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ಸಮಿತಿ.

೧೯೮೯-೯೦

ದೇಶದಲ್ಲಿಯೇ ಪ್ರಥಮ ಪೋಕೆಟ್ ಅಸೆಂಬ್ಲರ್ ಡಿಸ್ಸೆಂಬ್ಲರ್ (ಪಿಎಡಿ) ಸೌಲಭ್ಯದ ಸ್ಥಾಪನೆ.

೧೯೮೮-೮೯

ಅಸಾಂಪ್ರದಾಯಕ ಶಕ್ತಿ ಮೂಲಗಳ ಇಲಾಖೆಯ ಸಹಕಾರದಲ್ಲಿ ಮತ್ತು ಕೆ ಎಸ್ ಎಫ್ ಸಿ, ಕೆಎಸ್ಐಐಡಿಸಿ, ಕೆಪಿಸಿ ಮತ್ತು ಕೆಇಬಿಯ ಸಹಯೋಗದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಪೈಲಟ್ ವಿಂಡ್ ಮಿಲ್ ನ ಸ್ಥಾಪನೆ.

೧೯೮೨-೮೩

೧೯೮೩ರಲ್ಲಿ ಕೆಎಸ್ಐಐಡಿಸಿಯು (ಸರ್ಕಾರದ ನೋಡಲ್ ಏಜೆನ್ಸಿ) ಏಕ ಗವಾಕ್ಷಿ ಏಜೆನ್ಸಿಯನ್ನು ಸ್ಥಾಪಿಸಿತು.

೧೯೬೫-೬೬

ಕೆಎಸ್ಐಐಡಿಸಿಯ ಅಂಗ ಸಂಸ್ಥೆಗಳಾಗಿ ಮೈಸೂರು ಆಸ್ಬೆಸ್ಟೋಸ್ ಲಿಮಿಟೆಡ್, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಮತ್ತು ಮೈಸೂರು ಕಾಸ್ಮೆಟಿಕ್ಸ್ ಲಿಮಿಟೆಡ್ ಸಂಸ್ಥೆಗಳ ಉನ್ನತೀಕರಣ.