ಏರ್ಸ್ಟ್ರಿಪ್ಗಳು

ರಾಜ್ಯದಲ್ಲಿ ಏರ್ ಸ್ಟ್ರಿಪ್ ಗಳ ಅಭಿವೃದ್ಧಿ
 1. ಕೆಎಸ್ಐಐಡಿಸಿ – ಏರ್ ಸ್ಟ್ರಿಪ್ ಗಳ ಅಭಿವೃದ್ಧಿಯಲ್ಲಿ ನೋಡಲ್ ಏಜೆನ್ಸಿಯಾಗಿರುತ್ತದೆ.
 2. ಉದ್ದೇಶಿತ ಏರ್ ಸ್ಟ್ರಿಪ್ ಗಳು : ಚಿಕ್ಕಮಂಗಳೂರು, ಕಾರವಾರ, ಮಡಿಕೇರಿ (ಕುಶಾಲನಗರ), ರಾಯಚೂರು, ಗದಗ, ಬಾಗಲಕೋಟೆ, ದಾವಣಗೆರೆ ಮತ್ತು ಉಡುಪಿ
 3. ನಾಗರೀಕ ವಿಮಾನಯಾನ ಸಚಿವಾಲಯವು, ರಾಷ್ಟ್ರೀಯ ನಾಗರೀಕ ವಿಮಾನಯಾನ ನೀತಿಯನ್ನು (ಜೂನ್ ೨೦೧೬) ಮತ್ತು ವಿಭಾಗೀಯ ಸಂಪರ್ಕ ಯೋಜನೆಯನ್ನು { ಆರ್ ಸಿಎಸ್- ಉಡಾನ್ (ಅಕ್ಟೋಬರ್ ೨೦೧೬ ಮತ್ತು ಆಗಸ್ಟ್ ೨೦೧೭)} ಲಿಂಕ್: – ಮೋಕಾ-ಏನ್ಸಿಎಪಿ-೨೦೧೬ ಮೋಕಾ-ಆರ್ಸಿಎಸ್-ಉಡಾನ್-೨೦೧೭
 4. ಚಿಕ್ಕಮಂಗಳೂರು, ಕಾರವಾರ ಮತ್ತು ಮಡಿಕೇರಿಯಲ್ಲಿ (ಕುಶಾಲನಗರ) ಏರ್ ಸ್ಟ್ರಿಪ್ ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುತ್ತಿದೆ.
Airstrips
ಅರ್ ಸಿಎಸ್ – ಕರ್ನಾಟಕದಿಂದ ಕೈ ಗೊಳ್ಳಲಾಗಿರುವ ಕ್ರಮ
 1. ಕರ್ನಾಟಕ ಸರ್ಕಾರ ಮತ್ತು ನಾಗರೀಕ ವಿಮಾನಯಾನ ಸಚಿವಾಲಯದ ನಡುವೆ ದಿನಾಂಕ ೨೦ನೇ ಏಪ್ರಿಲ್ ೨೦೧೭ರಂದು ಎಂಒಯುಗೆ ಸಹಿಮಾಡಲಾಗಿರುತ್ತದೆ.
 2. ಆರ್ ಸಿಎಸ್ ಅಡಿಯಲ್ಲಿ ಕರ್ನಾಟಕ ಸರ್ಕಾರದ ರಿಯಾಯಿತಿಗಳು : (ಸರ್ಕಾರದ ದಿನಾಂಕ ೨೮.೦೪.೨೦೧೭ರ ಅಧಿಸೂಚನೆ)
  • ಆರ್ ಸಿಎಸ್ ವಿಮಾನ ನಿಲ್ದಾಣಗಳಿಗೆ
   • ವಿಜಿಎಫ್ ನಲ್ಲಿ ೨೦% ಪಾಲು ಕೊಡುವುದು
   • ಆರ್ ಸಿಎಸ್ ವಿಮಾನ ನಿಲ್ದಾಣಗಳಿಗೆ ಕನಿಷ್ಟ ದರದಲ್ಲಿ, ಅಗತ್ಯವಾದರೆ ಉಚಿತವಾಗಿ ಮತ್ತು ಋಣಭಾರ ರಹಿತವಾದ ಜಮೀನನ್ನು ನೀಡುವುದು.
   • ಭದ್ರತೆ ಮತ್ತು ಬೆಂಕಿ ಸೇವೆಗಳನ್ನು ಉಚಿತವಾಗಿ ಕೊಡುವುದು.
   • ವಿದ್ಯುತ್, ನೀರು ಮತ್ತು ಇತರ ಅಗತ್ಯ ಸೇವೆಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವುದು.
  • ಆರ್ ಸಿಎಸ್ ವಿಮಾನಯಾನ ನಿರ್ವಾಹಕರಿಗಾಗಿ
   • ಬೆಂಗಳೂರು ಮತ್ತು ಮಂಗಳೂರು (೨೮%), ಹುಬ್ಬಳ್ಳಿ ಮತ್ತು ಬೆಳಗಾವಿ (೪%) ವಿಮಾನ ನಿಲ್ದಾಣವನ್ನು ಹೊರತುಪಡಿಸಿ ಆರ್ ಸಿಎಸ್ ವಿಮಾನ ನಿಲ್ದಾಣಗಳ ಮೇಲೆ ಮಾರಾಟ ತೆರಿಗೆಯನ್ನು (ಎಸ್ ಟಿ) ೧%ಗೆ ಇಳಿಸುವುದು.
Airstrips
ನೋ ಸ್ಟ್ರಿಪ್ ವಿಮಾನ ನಿಲ್ದಾಣಗಳು ಮತ್ತು ಏರ್ ಸ್ಟ್ರಿಪ್ ಗಳಲ್ಲಿ ಸೌಲಭ್ಯಗಳು
 1. ವಿಮಾನ ನಿಲ್ದಾಣಗಳು / ಏರ್ಸ್ಟ್ರಿಪ್ ಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿರಬೇಕು (ಏರ್ಸ್ಟ್ರಿಪ್, ಟರ್ಮಿನಲ್ ಗಳಲ್ಲಿ ಭದ್ರತಾ ಚೌಕಿ, ಬೇಲಿ, ಸ್ಥಳೀಯ ಪೋಲಿಸರಿಂದ ಭದ್ರತೆ ಇತ್ಯಾದಿ)
 2. ನೋ ಫ್ರಿಲ್ ವಿಮಾನ ನಿಲ್ದಾಣಗಳ ಮಾದರಿಗಳನ್ನು ಅಖೈರುಗೊಳಿಸಲಾಗುತ್ತಿದೆ; ಅಖೈರುಗೊಳಿಸಲ್ವಟ್ಟ ಮಾದರಿಯನ್ನು ವಿಮಾನಯಾನ ಸಚಿವಾಲಯ / ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಇವರ ಒಪ್ಪಿಗೆಗೆ ಕಳುಹಿಸಲಾಗುವುದು.
ಏರೋ-ಸ್ಪೋರ್ಟ್ಸ್ ಚಟುವಟಿಕೆಗಳು, ಹಾರಾಟ ತರಬೇತಿ ಸಂಸ್ಥೆ, ಏರೋ ಮಾಡೆಲಿಂಗ್ ಮತ್ತು ವಸ್ತು ಸಂಗ್ರಹಾಲಯ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವಂತಹ ವಾಣಿಜ್ಯಾತ್ಮಕವಾಗಿ ಕಾರ್ಯಸಾಧ್ಯವಾಗುವಂತಹ ಸಮಗ್ರವಾದ ಏರ್ ಸ್ಟ್ರಿಪ್ ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಚಿಕ್ಕಮಗಳೂರು ಏರ್ ಸ್ಟ್ರಿಪ್
 1. ಲಭ್ಯವಿರುವ ಭೂಮೀನು ೧೦೦ ಎಕರೆಗಳು.
 2. ಹಾಲಿ ಇರುವ ಏರ್ಸ್ಟ್ರಿಪ್ ಮತ್ತು ಹೆಲಿಪ್ಯಾಡ್ ನ ಉನ್ನತೀಕರಣವನ್ನು ಕೈಗೊಳ್ಳಲಾಗುವುದು.
 3. ಸೆಸ್ಸ್ನಾ ಗ್ರಾಂಡ್ ಕಾರವಾನ್, ಪೈಲಾಟಸ್, ಬಿ ೨೦೦ ಮುಂತಾದ ವಿಮಾನಗಳನ್ನು ಸೂಕ್ತವಾಗಿರುವ ಸುಮಾರು ೧ ಕಿಮೀ ಉದ್ದದ ಏರ್ಸ್ಟ್ರಿಪ್ ಗಳನ್ನು ಅಭಿವೃದ್ಧಿಪಡಿಸಲುದ್ದೇಶಿಸಲಾಗಿದೆ.
Airstrips
ಕಾರವಾರ ಏರ್ಸ್ಟ್ರಿಪ್
 1. ಜಮಿನನ್ನು ಗುರುತಿಸಲಾಗಿರುತ್ತದೆ; ಕಾಡಿನ ಜಮೀನನ್ನು ವರ್ಗಾಯಿಸಲು ಅರ್ಜಿ ಸಲ್ಲಿಸಲಾಗಿದೆ.
 2. ವಿವರವಾದ ಸರ್ವೆಯನ್ನು (೩೫೦ ಎಕರೆಗಳು) ನಡೆಸಲಾಗಿರುತ್ತದೆ.
 3. ಸಿ ೨೦೮ಬಿ , ಪೈಲಾಟಸ್ , ಬಿ ೨೦೦ ಮುಂತಾದ ವಿಮಾನಗಳಿಗೆ ಸೂಕ್ತವಾಗಿರುವ ಸುಮಾರು 1 ಕಿಮೀ ಉದ್ದದ ಏರ್ಸ್ಟ್ರಿಪ್ ಗಳನ್ನು ಮತ್ತು ಹೆಲಿಪ್ಯಾಡ್ ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
Airstrips
ಮಡಿಕೇರಿ ಏರ್ಸ್ಟ್ರಿಪ್ (ಕುಶಾಲನಗರ)
 1. ಸೈನಿಕ ಶಾಲೆಯ ಪಕ್ಕದಲ್ಲಿ ೯೫೦ ಮೀಟರ್ ಉದ್ದದ ಏರ್ ಸ್ಟ್ರಿಪ್ ನ್ನು ಅಭಿವೃದ್ದಿಪಡಿಸಲು ೪೯.೫ ಎಕರೆ ಜಮೀನನ್ನು ಗುರುತಿಸಲಾಗಿದೆ.
 2. ಇದು ಪ್ರಾರಂಭಿಕ ಹಂತದಲ್ಲಿರುತ್ತದೆ.
 3. ಏರ್ಸ್ಟ್ರಿಪ್ ಮತ್ತು ಹೆಲಿಪ್ಯಾಡ್ ನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
Airstrips