//ನೈಸರ್ಗಿಕ ಅನಿಲ ಕೊಳವೆ ಮಾರ್ಗ

ನೈಸರ್ಗಿಕ ಅನಿಲ ಕೊಳವೆ ಮಾರ್ಗ

ಟ್ರಂಕ್ ಕೊಳವೆ ಮಾರ್ಗ

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ದಾಭೋಲ್ ನಿಂದ ಬೆಂಗಳೂರುವರೆಗೆ ಅನಿಲ ಸರಬರಾಜು ಮಾಡಲು ೭೪೬ ಕಿ.ಮೀ ಉದ್ದದ ೧೬ ಎಂಎಂಎಸ್ ಸಿಎಮ್ ಡಿ ವಿನ್ಯಾಸ ಸಾಮರ್ಥ್ಯದ ಟ್ರಂಕ್ ಕೊಳವೆ ಮಾರ್ಗ ಅಳವಡಿಸುವಿಕೆ ಕೈಗೆತ್ತಿಕೊಂಡು ಮುಗಿಸಿರುತ್ತದೆ. ಕೊಳವೆ ಮಾರ್ಗವು ಕರ್ನಾಟಕದ ಒಂಭತ್ತು ಜಿಲ್ಲೆಗಳಾದ ಬೆಳಗಾವಿ, ಗದಗ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಮತ್ತು ರಾಮನಗರ ಮೂಲಕ ಹಾದು ಹೋಗುತ್ತದೆ. ರಾಜ್ಯದಲ್ಲಿ ಜಿಎಐಎಲ್ ರವರ ಅನಿಲ ಕೊಳವೆ ಮಾರ್ಗದ ಅಳವಡಿಕೆಯಲ್ಲಿ ಕೆಎಸ್ಐಐಡಿಸಿಯು ತನ್ನ ನೋಡಲ್ ಏಜೆಂಟ್ ಪಾತ್ರವನ್ನು ಮುಂದುವರೆಸಿರುತ್ತದೆ. ಕೊಳವೆ ಮಾರ್ಗವು ಈ ಕೆಳಗೆ ತೋರಿಸಿರುವಂತೆ ೧೮.೦೨.೨೦೧೩ ರಂದು ಕಾರ್ಯಾರಂಭ ಮಾಡಿರುತ್ತದೆ.

Trunk Pipeline Trunk Pipeline

ನಗರ ಅನಿಲ ಹಂಚಿಕೆ( ಸಿಜಿಡಿ)

ಪೆಟ್ರೋಲಿಯಂ & ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (ಪಿ.ಎನ್.ಜಿ.ಆರ್.ಬಿ.) ಅವರು ಬೆಂಗಳೂರು ವಲಯದಲ್ಲಿ ಸಿಜಿಡಿ ಒದಗಿಸುವ ಸಲುವಾಗಿ ಕರೆದಿರುವ ಟೆಂಡರಿನಲ್ಲಿ ಮೆ. ಗೈಲ್ ಗ್ಯಾಸ್ ಲಿಮಿಟೆಡ್ ಇವರು ಯಶಸ್ವೀ ಬಿಡ್ಡರ್ ಆಗಿರುತ್ತಾರೆ. ವಿವರಗಳನ್ನು ಕೆಳಗೆ ನೀಡಲಾಗಿದೆ.

Trunk Pipeline Trunk Pipeline

ಸಿಜಿಡಿ ಜಾಲವು ನಗರಗಳಲ್ಲಿರುವ ಮನೆಗಳು, ವಾಹನಗಳ ಸಿ ಎನ್ ಜಿ ಮತ್ತು ವಾಣಿಜ್ಯ / ಕೈಗಾರಿಕಾ ಇಂಧನದ ಬೇಡಿಕೆಯನ್ನು ಪೂರೈಸಲಿದೆ.

  1. ಜಿಎಐಎಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆಯು ಸಿಜಿಡಿ ಯೋಜನೆಯನ್ನು ಪಡೆದುಕೊಂಡಿರುತ್ತದೆ. ಬೆಂಗಳೂರು ವಲಯವು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡಿರುತ್ತದೆ – ೪೩೯೫ ಚದರ ಕಿ.ಮೀ.ಗಳು.
  2. ಪ್ರಾರಂಭದಲ್ಲಿ ೫ ವರ್ಷಗಳ ಗುರಿ: ೧೫೮೩ ಇಂಚ್-ಕಿಮೀ; ೧.೩೨ ಲಕ್ಷ ಪಿ ಎನ್ ಜಿ ಸಂಪರ್ಕಗಳು; ಅಂದಾಜು ವೆಚ್ಚ – ರೂ ೭೪೯ ಕೋಟಿಗಳು.
  3. ಪ್ರಗತಿ: ೬೯೯ ಕಿ.ಮೀ. ಕೊಳವೆ ಮಾರ್ಗ ಅಳವಡಿಸಿದೆ; ೨೮೫೦೦ ಪಿಎನ್ ಜಿ ಸಂಪರ್ಕಗಳು ಮುಗಿದಿರುತ್ತದೆ; (೩೫೦೦ ಮನೆಗಳಿಗೆ ಅನಿಲವನ್ನು ಸರಬರಾಜು ಮಾಡಲಾಗುತ್ತಿದೆ); ಪ್ರೇಮ್ ನಗರದಲ್ಲಿ (ಬೆಗ್ಗರ್ಸ್ ಕಾಲೋನಿ) ಸಿಎನ್ ಜಿ ಸ್ವೇಷನ್ ವಾಣಿಜ್ಯ ವಹಿವಾಟಿನ ಅಂಚಿನಲ್ಲಿರುತ್ತದೆ.
  4. ಬಿಇಎಲ್, ಜಿಂದಾಲ್ ಕಾಲೋನಿ, ಹೆಚ್ ಎಸ್ ಆರ್ ಬಡಾವಣೆ, ಯಶವಂತಪುರ, ಸಿಂಗಸಂದ್ರ ಮತ್ತು ಬೆಳ್ಳಂದೂರು ಪ್ರಧೇಶಗಳಲ್ಲಿ ಅನಿಲವನ್ನು ಸರಬರಾಜು ಮಾಡಲಾಗುತ್ತಿದೆ.

ಮೆ. ಜಿಎಐಎಲ್/ ಜಿಎಐಎಲ್ ಗ್ಯಾಸ್ ಲಿಮಿಟೆಡ್ ಇವರೊಂದಿಗೆ ರೂ.೨೦೦ ಕೋಟಿಯ ಅಧಿಕೃತ ಬಂಡವಾಳದ ಜಂಟೀ ಉದ್ಯಮ ಕಂಪೆನಿಯನ್ನು ಸ್ಥಾಪಿಸಲು (ಜೆವಿಸಿ) ರಾಜ್ಯ ಸರ್ಕಾರದ ಏಜೆನ್ಸಿಯಾಗಿ ಕೆಎಸ್ಐಐಡಿಸಿಯನ್ನು ಗೊತ್ತುಪಡಿಸಲಾಗಿರುತ್ತದೆ. ಜಿಎಐಎಲ್ / ಗೈಲ್ ಗ್ಯಾಸ್ ಲಿಮಿಟೆಡ್ ಇವರು ಕಂಪೆನಿಯ 26% ಶೇರುಗಳನ್ನು ಹೊಂದಿದ್ದರೆ, ಕೆಎಸ್ಐಐಡಿಸಿಯು ೨೪% ಶೇರುಗಳನ್ನು ಹೊಂದಿ, ಉಳಿದ ೫೦% ಶೇರುಗಳನ್ನು ಹಣಕಾಸು ಸಂಸ್ಥೆಗಳು, ಹೂಡಿಕೆದಾರರು ಮತ್ತು ಸ್ರಾಟೆಜಿಕ್ ಪಾಲುದಾರರಿಗೆ (ಹಣಕಾಸು ಸಂಸ್ಥೆಗಳ ಸ್ರಾಟೆಜಿಕ್ ಪಾಲುದಾರರು ಮತ್ತು ಅವರ ಅಂಗ ಸಂಸ್ಥೆಗಳಲ್ಲಿ ಯಾವುದೇ ಒಬ್ಬ ಹೂಡಿಕೆದಾರರಿಗೆ ೨೦%ಗಿಂತ ಹೆಚ್ಚು ಶೇರು ಪಡೆಯಲು ಅವಕಾಶ ನೀಡಲಾಗುವುದಿಲ್ಲ) ನೀಡಲಾಗುವುದು.